Tuesday, April 28, 2020

ವೇದಗಣಿತಮಣಿಮಾಲಿಕೆ ಮಣಿ - ೧೬

ವೇದಗಣಿತಮಣಿಮಾಲಿಕೆ

ಮಣಿ - ೧೬

ಇಷ್ಟರವರೆಗೆ ಯಾವದೂನಂ ತಾವದೂನೀಕೃತ್ಯ ವರ್ಗಂ ಚ ಯೋಜಯೇತ್ ಎಂಬ ಸೂತ್ರವನ್ನು ಉಪಯೋಗಿಸಿ ಎರಡು ಸಂಖ್ಯೆಗಳ ಗುಣಾಕಾರವನ್ನು ಮಾಡುವ ಕ್ರಮವನ್ನು ಕಲಿತೆವು. ಎರಡಕ್ಕಿಂತ ಹೆಚ್ಚು ಸಂಖ್ಯೆಗಳಿದ್ದರೂ ಈ ಸೂತ್ರವನ್ನು ಉಪಯೋಗಿಸಿ ಸುಲಭವಾಗಿ ಉತ್ತರವನ್ನು ಕಂಡುಹಿಡಿಯಬಹುದು.

ಉದಾಹರಣೆ 1:
107X103X105 =?
ಇಲ್ಲಿ ಆಧಾರ ಸಂಖ್ಯೆ 100.
107             +7
103             +3
105             +5
-----------
(107+3+5)/(7X3)+(3X5)+(7X5)/7X3X5
115/21+15+35/105
115/71/105
11571/05
       +1
-----------
1157205
ಇಲ್ಲಿ ಮೂರುಭಾಗಗಳಲ್ಲಿ ಉತ್ತರವನ್ನು ಕಂಡು ಹಿಡಿಯಬೇಕಾಗುವುದು.

ಪೂರ್ವಭಾಗ: ದತ್ತ ಸಂಖ್ಯೆಗಳಲ್ಲಿ ಯಾವುದಾದರೊಂದು ಸಂಖ್ಯೆಗೆ ಉಳಿದೆರಡು ದತ್ತಸಂಖ್ಯೆಗಳ ಅತಿರಿಕ್ತ ಸಂಖ್ಯೆಗಳನ್ನು ಕೂಡಿಸಿ.
107+3+5=115 ಅಥವಾ 103+7+5=115 ಅಥವಾ 105+3+7=115

ಮಧ್ಯಭಾಗ: ಎರಡೆರಡು ಅತಿರಿಕ್ತ ಸಂಖ್ಯೆಗಳನ್ನು ತೆಗೆದುಕೊಂಡು ಗುಣಿಸಿ ಗುಣಲಬ್ಧಗಳ ಮೊತ್ತವನ್ನು ಬರೆಯಿರಿ. ಇಲ್ಲಿ (7X3)+(3X5)+(7X5)=71

ಕೊನೆಯ ಭಾಗ: ಎಲ್ಲ ಮೂರು ಅತಿರಿಕ್ತ ಸಂಖ್ಯೆಗಳನ್ನು ಒಮ್ಮೆಲೆ ಗುಣಿಸಿ. 7X3X5=105

ಆಧಾರಸಂಖ್ಯೆ 100 ಆಗಿರುವುದರಿಂದ ಕೊನೆಯ ಭಾಗದಲ್ಲಿ ಎರಡೇ ಸ್ಥಾನಗಳಿಗೆ ಅವಕಾಶ. ಹಾಗಾಗಿ 105 ರ 1 ನ್ನು ಮಧ್ಯಭಾಗಕ್ಕೆ ಕೂಡಿಸಿ.

ಉದಾಹರಣೆ 2:
108         +8
106         +6
107         +7
------------------
(108+6+7)/(8X6)+(6X7)+(8X7)/8X7X6
121/48+42+56/336
121/146/336
121/46/36
   +1  +3
--------------
1224936
ಮಧ್ಯಭಾಗದಲ್ಲಿಯೂ ಎರಡೇ ಸ್ಥಾನಗಳಿಗೆ ಅವಕಾಶ. ಹಾಗಾಗಿ ಅತಿರಿಕ್ತವಾದ 1 ನ್ನು ಪೂರ್ವಭಾಗಕ್ಕೆ ಸೇರಿಸಲಾಗಿದೆ.

ಉದಾಹರಣೆ 3:
102        +2
104        +4
  97        -3
----------------
= 102+4-3/(2X4)+(4X-3)+(-3X2)/2X4X-3
= 103/8-12-6/2^4^
= 103/1^0^/2^4^ = 1031^0^2^4^
= 1028976

10003        +3
10001        +1
10007        +7
-------------------
=10003+1+7/3X1+1X7+7X3/3X1X7
=10011/0031/0021 = 1001100310021

ಪ್ರಯತ್ನಿಸಿ: 1004X992X997

No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...