Wednesday, April 22, 2020

ವೇದಗಣಿತಮಣಿಮಾಲಿಕೆ; ಮಣಿ ೭

5376975368X9999999999

ಈ ಸಮಸ್ಯೆಯನ್ನು ಬಿಡಿಸಲು ಎಷ್ಟು ಸಮಯ ತೆಗೆದುಕೊಳ್ಳುವಿರಿ?

ವೇದಗಣಿತ ಪದ್ಧತಿಯಲ್ಲಿ ಇದಕ್ಕೊಂದು ಸರಳ ಮಾರ್ಗವಿದೆ.

೧. ಗುಣಾಕಾರ ಚಿಹ್ನೆಯ ಎಡಭಾಗದಲ್ಲಿ ಇರುವ ಗುಣ್ಯಕ್ಕೆ *ಏಕನ್ಯೂನೇನ ಪೂರ್ವೇಣ* (ಒಂದು ಕಡಿಮೆ ಇರುವ ಮೊದಲ ಸಂಖ್ಯೆಯಿಂದ) ಎಂಬ ಸೂತ್ರವನ್ನು ಅನ್ವಯಿಸಿ ಅದರಿಂದ ಒಂದನ್ನು ಕಳೆಯಬೇಕು.

5376975368 - 1= 5376975367
ಇದು ಉತ್ತರದ ಪೂರ್ವಾರ್ಧ.

೨. ಈಗ ಗುಣ್ಯಕ್ಕೆ *ನಿಖಿಲಂ ನವತಃ ಚರಮಂ ದಶತಃ* ಸೂತ್ರವನ್ನು ಅನ್ವಯಿಸಿ ಪೂರಕವನ್ನು ಬರೆಯಿರಿ.
4624024632. ಇದು ಉತ್ತರದ ಉತ್ತರಾರ್ಧ.

ಈಗ ಪೂರ್ವಾರ್ಧ ಮತ್ತು ಉತ್ತರಾರ್ಧಗಳನ್ನು ಒಟ್ಟಿಗೆ ಬರೆಯಿರಿ.

53769753674623024632
ಇದು ದತ್ತ ಸಮಸ್ಯೆಯ ಉತ್ತರ.

_ಇನ್ನೊಂದು ಉದಾಹರಣೆ:_

856X999 = 855/144
                  = 855144

*ಪ್ರಯತ್ನಿಸಿ:*

374943X999999=?
235678975X999999999=?

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...