Wednesday, April 22, 2020

ವೇದಗಣಿತಮಣಿಮಾಲಿಕೆ ಮಣಿ ೬


ಏಕಾಧಿಕೇನ ಪೂರ್ವೇಣ ಸೂತ್ರದ ಇನ್ನಷ್ಟು ಉಪಯೋಗವನ್ನು ಮುಂದೆ ನೋಡೋಣ.


*ನಿಖಿಲಂ ನವತಶ್ಚರಮಂ ದಶತಃ* ಎಂಬುದು ವೇದಗಣಿತ ಪದ್ಧತಿಯಲ್ಲಿ ತುಂಬಾ ಉಪಯೋಗವುಳ್ಳ ಸೂತ್ರ.

*ಎಲ್ಲವನ್ನೂ ಒಂಭತ್ತರಿಂದ ಕೊನೆಯದನ್ನು ಹತ್ತರಿಂದ* ಎಂಬುದು ಈ ಸೂತ್ರದ ಅರ್ಥ.

ಉದಾ: 68 ಕ್ಕೆ ಈ ಸೂತ್ರವನ್ನು ಅನ್ವಯಿಸಿದರೆ 32 ಸಿಗುತ್ತದೆ.  (9-6,10-8). ಇದು 100-68 ಕ್ಕೆ ಸಮ. 68 ಹಾಗೂ 32 ಇವು 100 ರ ಆಧಾರದಲ್ಲಿ ಪರಸ್ಪರ ಪೂರಕಗಳು.

597 ➡️ 9-5/9-9/10-7
        ➡️ 403
ಇದು 1000-597 ಕ್ಕೆ ಸಮ. 403 ಹಾಗೂ 597 ಇವು ಸಾವಿರದ ಆಧಾರದಲ್ಲಿ ಪೂರಕಗಳು.

ಇದೇ ಸೂತ್ರವನ್ನು ಉಪಯೋಗಿಸಿ ಈ ಕೆಳಗಿನ ಸಂಖ್ಯೆಗಳ ಪೂರಕಗಳನ್ನು ಕಂಡು ಹಿಡಿಯಿರಿ.

8589
657975328
7464297

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...