Tuesday, April 28, 2020

ವೇದಗಣಿತಮಣಿಮಾಲಿಕೆ ಮಣಿ - ೧೩

*ವೇದಗಣಿತಮಣಿಮಾಲಿಕೆ*
ಮಣಿ - ೧೩

ಕಳೆದ ಮೂರು ದಿನಗಳಿಂದ ಯಾವದೂನಂ ತಾವದೂನೀಕೃತ್ಯ ವರ್ಗಂ ಚ ಯೋಜಯೇತ್ ಎಂಬ ಸೂತ್ರವನ್ನು ಉಪಯೋಗಿಸಿ ವರ್ಗವನ್ನು ಕಂಡು ಹಿಡಿಯುವ ವಿಧಾನವನ್ನು ತಿಳಿದುಕೊಳ್ಳುತ್ತಿದ್ದೇವೆ. ಇಂದು ಸ್ವಲ್ಪ ಮಾರ್ಪಡಿಸಿ ಗುಣಾಕಾರವನ್ನು ಮಾಡುವ ವಿಧಾನವನ್ನು ಕಲಿತುಕೊಳ್ಳೋಣ.

106×102=?

ಇಲ್ಲಿ ಎರಡೂ ಸಂಖ್ಯೆಗಳ ಆಧಾರ ಸಂಖ್ಯೆ 100.

*ಪೂರ್ವಾರ್ಧ:* ಮೊದಲನೇ ಸಂಖ್ಯೆ106 ಕ್ಕೆ ಎರಡನೇ ಸಂಖ್ಯೆಯ ಅತಿರಿಕ್ತ ಸಂಖ್ಯೆ 2ನ್ನು ಕೂಡಿಸಿ. ಅಥವಾ ಎರಡನೇ ಸಂಖ್ಯೆ 102ಕ್ಕೆ ಮೊದಲ ಸಂಖ್ಯೆಯ ಅತಿರಿಕ್ತ ಸಂಖ್ಯೆ6 ನ್ನು ಕೂಡಿಸಿ.

*ಉತ್ತರಾರ್ಧ:* ಎರಡೂ ಸಂಖ್ಯೆಗಳ ಅತಿರಿಕ್ತ ಸಂಖ್ಯೆಗಳನ್ನು ಪರಸ್ಪರ ಗುಣಿಸಿ.

  106.        +6
×102.        +2
-------------------
106+2/6×2  ಅಥವಾ 102+6/6×2
= 108/12 = *10812*

_ಉದಾಹರಣೆ 2:_

  103.       +3
×101.       +1
-------
103+1/3×1
=10403

_ಉದಾಹರಣೆ 3:_

  112.      +12
×109.      +09
--------
112+9/108
12108
     1
-----------
12208

_ಉದಾಹರಣೆ 4:_

  100004.         +4
×100007.         +7
----------------
=100004+7/4×7
=10001100028

_ಉದಾಹರಣೆ 5:_

  94.         -6
×98.         -2
-----------
94-2/(-6×-2) ಅಥವಾ 98-6/-6×-2
= 9212

_ಉದಾಹರಣೆ 6:_

  9993.          -7
×9995.          -5
---------------
= 9993-5/-7×-5
= 99880035

ಪ್ರಯತ್ನಿಸಿ: 102×107; 1004×1008; 111×112; 99×92; 99989×99995.

No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...