Wednesday, April 22, 2020

ವೇದಗಣಿತಮಣಿಮಾಲಿಕೆ ಮಣಿ ೯

ಇಂದು ಗುಣಕದಲ್ಲಿ ಕಡಿಮೆ ಅಂಕೆಗಳಿದ್ದರೆ ಹೇಗೆ ಮಾಡುವುದೆಂದು ತಿಳಿಯೋಣ.

375X99

ಈ ಉದಾಹರಣೆಯಲ್ಲಿ ಗುಣ್ಯ ಮೂರು ಅಂಕೆಗಳನ್ನು ಹಾಗೂ ಗುಣಕ ಎರಡು ಅಂಕೆಗಳನ್ನು ಹೊಂದಿದೆ.

375×99
------------
3,74
-.   3
------------
371/ 25
=37125 ಇದು ಉತ್ತರ.

ಇಲ್ಲಿ ಪೂರ್ವಾರ್ಧವನ್ನು ಪಡೆಯುವುದು ಸ್ವಲ್ಪ ಕಷ್ಟದ ಕೆಲಸ.

ಮೊದಲಿನಂತೆ ಏಕನ್ಯೂನೇನ ಪೂರ್ವೇಣ ಸೂತ್ರದಿಂದ 374 ಲಭ್ಯ.

ಇದರಲ್ಲಿ ಬಲಗಡೆಯಿಂದ ಎರಡು ಅಂಕೆಗಳನ್ನು ಎಣಿಸಿ ಗುರುತು ಹಾಕಿಕೊಳ್ಳಿ. (ಗುಣಕದಲ್ಲಿ ಎರಡು ಅಂಕೆಗಳು ಇರುವುದರಿಂದ) 3,74

ಗುರುತಿನ ಎಡಗಡೆ ಇರುವ ಸಂಖ್ಯೆಯನ್ನು ಈ ಸಂಖ್ಯೆಯಿಂದ ಕಳೆಯಿರಿ. 374 - 3 = 371. ಇದು ಪೂರ್ವಾರ್ಧ.

ಈಗ ಗುರುತಿನ ಬಲಭಾಗದಲ್ಲಿರುವ ಎರಡು ಅಂಕೆಗಳಿಗೆ ನಿಖಿಲಂ ನವತಶ್ಚರಮಂ ದಶತಃ ಸೂತ್ರವನ್ನು ಅನ್ವಯಿಸಿ. 9-7=2,9-4=5~ 25 ಇದು ಉತ್ತರಾರ್ಧ.
ಪೂರ್ಣ ಉತ್ತರ 37125.

ಇನ್ನೊಂದು ಉದಾಹರಣೆಯನ್ನು ನೋಡೋಣ.

6428731 × 999
------------------------
6428,730
-       6428
------------------------
6422302/269 = 6422302269

ಪ್ರಯತ್ನಿಸಿ;

258754 × 999
96538765 × 99999
4367854 × 99

ನಿನ್ನೆಯ ಉತ್ತರ:
97531 99 02468
1607532 9999 8392567

No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...