ಈ ಸಂಚಿಕೆಯಲ್ಲಿ *ಏಕಾಧಿಕೇನ ಪೂರ್ವೇಣ* (ಮೊದಲ ಅಂಕೆಗಿಂತ ಒಂದು ಹೆಚ್ಚಿಗೆ ಇರುವ ಅಂಕೆಯಿಂದ) ಎಂಬ ಸೂತ್ರವನ್ನು ಉಪಯೋಗಿಸುವ ಕ್ರಮವನ್ನು ತಿಳಿದುಕೊಳ್ಳೋಣ.
5²=25
15²=225
25²=625
35²=?
ಗಮನಿಸಿ: ಐದರಿಂದ ಕೊನೆಗೊಳ್ಳುವ ಸಂಖ್ಯೆಯ ವರ್ಗ 25 ರಿಂದ ಕೊನೆಗೊಳ್ಳುತ್ತದೆ. ಹಾಗಾಗಿ ಅದನ್ನು ನೇರವಾಗಿ ಬರೆಯಬಹುದು. ಅದರ ಹಿಂದಿನ ಅಂಕೆಗಳನ್ನು ಪಡೆಯಲು ಮೇಲಿನ ಸೂತ್ರವನ್ನು ಉಪಯೋಗಿಸಬೇಕು.
35 ರಲ್ಲಿ 5ರ ಪೂರ್ವ ಅಂಕೆ 3. ಅದರ ಏಕಾಧಿಕ 3+1=4. ಈ ಹೊಸ ಅಂಕೆಯಿಂದ ಮೂಲ ಅಂಕೆ 3ನ್ನು ಗುಣಿಸಿ.(ಪೂರ್ವೇಣ ಎಂಬ ಪದದ ತೃತೀಯಾ ವಿಭಕ್ತಿ ಗುಣಾಕಾರವನ್ನು ಸಂಕೇತಿಸುತ್ತದೆ) ಆಗ ಸಿಗುವ 12 ನ್ನು 25 ಹಿಂದೆ ಬರೆಯಿರಿ. ಅಥವಾ ದತ್ತ ಪ್ರಶ್ನೆಯಲ್ಲಿ 5ರ ಹಿಂದಿರುವ ಅಂಕೆ/ಸಂಖ್ಯೆಯನ್ನು ಅದರ ಮುಂದಿನ ಅಂಕೆ/ಸಂಖ್ಯೆಯಿಂದ ಗುಣಿಸಿ.
35²= 3(3+1)/25
= 3X4/25
= 12/25
= 1225
65²= 6X7/25
= 4225
ಪ್ರಯತ್ನಿಸಿ -
85²=?
105²=?
45²=?
ಅಥವಾ 5ರಿಂದ ಕೊನೆಗೊಳ್ಳುವ ಯಾವುದೇ ಸಂಖ್ಯೆ.
No comments:
Post a Comment