Wednesday, January 8, 2020

ಪರಕಾಯ ಪ್ರವೇಶ

ಪುರಾಣ ಪಾತ್ರಗಳ ಹೃದಯವನ್ನು ಅನಾವರಣಗೊಳಿಸುವ

*ಪರಕಾಯ ಪ್ರವೇಶ*

ಲೇಖಕರು: _ಶ್ರೀ ರಾಧಾಕೃಷ್ಣ ಕಲ್ಚಾರ್_
ಪ್ರಕಾಶಕರು: _ಸಾಹಿತ್ಯ ಸಿಂಧು ಪ್ರಕಾಶನ, ಬೆಂಗಳೂರು_
ಬೆಲೆ: _140/-_

ಯಕ್ಷಗಾನ ತಾಳಮದ್ದಳೆಯ ಪ್ರಸಿದ್ಧ ಅರ್ಥಧಾರಿ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರು ಉತ್ಥಾನ ಪತ್ರಿಕೆಗೆ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹವಿದು.

ಇಲ್ಲಿ ಪುರಾಣದ ಪಾತ್ರಗಳು ಮಾತನಾಡುತ್ತವೆ. ತಮ್ಮ ಜೀವನವನ್ನು, ಹೃದಯದಲ್ಲಿ ಹುದುಗಿರುವ ರಹಸ್ಯವನ್ನು ಬಿಚ್ಚಿಡುತ್ತವೆ.

ಹದಿನಾಲ್ಕು ಪಾತ್ರಗಳಲ್ಲಿ ಹೆಚ್ಚಿನವು ಸಾಮಾನ್ಯ ಪಾತ್ರಗಳು. ದಂಡಕ, ಸುಯೋಧನ ಹಾಗೂ ಪರೀಕ್ಷಿತ ಈ ಮೂರು ಪಾತ್ರಗಳನ್ನು ಬಿಟ್ಟರೆ ಉಳಿದವೆಲ್ಲ ಪುರಾಣದ ದೃಷ್ಟಿಯಿಂದ ಅಮುಖ್ಯವಾದವು. ಮಹಾಭಾರತದ ಒಂದೆರಡು ಸಂದರ್ಭಗಳಲ್ಲಿ ಮಾತ್ರ ಕೇಳಿ ಬರುವ  ವಿಕರ್ಣ, ಕೀಚಕವಧಾಪ್ರಸಂಗದ ಪೋಷಕಪಾತ್ರವಾದ ಸುದೇಷ್ಣೆ, ಅತಿಸಾಮಾನ್ಯ ಪಾತ್ರಗ಼ಳಾದ ರಥಕಾರ, ದುರ್ಯೋಧನನ ಸೂತ ಪ್ರಾತಿಕಾಮಿ, ಶಲ್ಯನ ಸಾರಥಿ, ರಾಮಾಯಣದ ಭದ್ರ ಮತ್ತು ರುಮೆ ಇಂತಹ ಸಣ್ಣ ಪಾತ್ರಗಳ ಕಣ್ಣಿಂದ ವಿವಿಧ ಸನ್ನಿವೇಶಗಳನ್ನು ನೋಡುವ ಅವರ ನೆಲೆಯಲ್ಲಿ ನಿಂತು ವಿಮರ್ಶಿಸುವ ಲೇಖಕರ ಪ್ರಯತ್ನ ಅನ್ಯಾದೃಶ.

ಸರಳವಾದ, ಹಿತವಾದ, ಪುರಾಣಕಥೆಗಳಿಗೆ ಒಪ್ಪುವ ಭಾಷೆ, ಹಾಗೂ ಕುತೂಹಲ ಕೆರಳಿಸುವ ನಿರೂಪಣಾ ಶೈಲಿ ಹೊತ್ತಿಗೆಯ ಸೊಬಗನ್ನು ಹೆಚ್ಚಿಸಿವೆ.

ಪುರಾಣ ಕಥೆಗಳಲ್ಲಿ ಆಸಕ್ತಿ ಇರುವ, ಅಲ್ಲಿನ ಪಾತ್ರಗಳ ಹೃದಯವನ್ನು ಅರಿಯುವ ಹಂಬಲವಿರುವವರಿಗೆ ಅತ್ಯುಪಯುಕ್ತ ಪುಸ್ತಕವಿದು.

ಒಮ್ಮೆ ಓದಿ ಅನುಭವಿಸಿ.

ಆಸಕ್ತರು ಲೇಖಕರನ್ನು 9449086653 ಸಂಖ್ಯೆಯ ಮೂಲಕ ಸಂಪರ್ಕಿಸಬಹುದು.

📖 *_ಪುಸ್ತಕಾವಲೋಕನ:_*
*ಮಹಾಬಲ ಭಟ್, ಗೋವಾ*

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...