ಮಹಿಳಾ ದಿನಾಚರಣೆಗೆ ವಿಶಿಷ್ಟ ಲೇಖನ ಸರಣಿ
*ಸನಾತನ ಭಾರತದ ಸ್ತ್ರೀರತ್ನಗಳು*
ದ್ವಿತೀಯ ಅವತರಣಿಕೆ
ಸಂಚಿಕೆ 6
*ಉಶಿಜಾ*
ಮಮತಾ ಎಂಬ ಸಾಧ್ವಿ ನಾರಿಯು ಗರ್ಭವತಿಯಾಗಿದ್ದಾಗ ಅವಳ ಮೈದುನ ಬೃಹಸ್ಪತಿ ಅತ್ಯಾಚಾರಕ್ಕೆ ಯತ್ನಿಸಿದ್ದ. ಗರ್ಭದಲ್ಲಿರುವ ಪಿಂಡ ಅದಕ್ಕೆ ಅಡ್ಡಿಯಾಗಿದ್ದರಿಂದ ಹುಟ್ಟುವ ಮಗು ಕುರುಡಾಗಲೆಂದು ಶಪಿಸಿದ್ದ. ಅದರಂತೆ ದೀರ್ಘತಮ ಮಹರ್ಷಿ ಹುಟ್ಟು ಕುರುಡನಾಗಿ ಜನ್ಮ ತಳೆದ. ಅವನ ಕೈ ಹಿಡಿದ ಮಡದಿ ಪ್ರದ್ವೇಷಿಣಿಯೂ ಹೆಸರಿಗೆ ತಕ್ಕಂತೆ ಅವನನ್ನು ದ್ವೇಷಿಸುತ್ತಿದ್ದಳು. ಒಂದಿನ ಗೌತಮಾದಿ ಮಕ್ಕಳ ಸಹಾಯದಿಂದ ಅಂಧ ಗಂಡನನ್ನು ಗಂಗಾನದಿಯಲ್ಲಿ ಎಸೆದು ಬಿಟ್ಟಳು.
ಗಂಗಾನದಿಯಲ್ಲಿ ತೇಲುತ್ತಿದ್ದ ಋಷಿಯನ್ನು ನೋಡಿದ ಅಂಗರಾಜ್ಯಾಧಿಪತಿ ಬಲಿಯು ಅವನನ್ನು ತನ್ನರಮನೆಗೆ ಕರೆದುಕೊಂಡು ಹೋಗಿ ಉಪಚರಿಸಿದ. ಮುನಿಯ ಸೇವೆಗೆ ಸ್ವತಃ ರಾಣಿಯೇ ನಿಂತಳು. ಅನೇಕ ದಿನಗಳವರೆಗೆ ಸೇವೆ ಮಾಡಿ ಬೇಸತ್ತ ಅವಳು ತನ್ನ ದಾಸಿ ಉಶಿಜಾಳನ್ನು ಕಳಿಸಿದಳು.
ಬುದ್ಧಿಮತಿಯೂ ಗುಣವತಿಯೂ ಉಶಿಜಾ ಶ್ರದ್ಧೆಯಿಂದ ಮುನಿಯ ಸೇವೆಯನ್ನು ಮಾಡಿದಳು. ಅವಳ ಸೇವಾತತ್ಪರತೆ ಹಾಗೂ ಆಧ್ಯಾತ್ಮಜ್ಞಾನದಾಹಕ್ಕೆ ಮೆಚ್ಚಿದ ಋಷಿಯು ಅವಳನ್ನು ಪತ್ನಿಯಾಗಿ ಸ್ವೀಕರಿಸಿದ. ದೀರ್ಘತಮನ ತತ್ತ್ವೋಪದೇಶದಿಂದ ಉಶಿಜಾ ಬ್ರಹ್ಮವಾದಿನಿಯಾದಳು. ಕಕ್ಷೀವಾನ್ ಹಾಗೂ ದೀರ್ಘಶ್ರವ ಎಂಬ ಪ್ರಸಿದ್ಧ ಋಷಿಗಳು ಉಶಿಜಾಳ ಮಕ್ಕಳು. ಕಕ್ಷೀವಾನ್ ಮಹರ್ಷಿಯ ಮಗಳೇ ಪ್ರಸಿದ್ಧ ಬ್ರಹ್ಮವಾದಿನಿಯಾದ ಘೋಷಾ. ಋಗ್ವೇದದ ಪ್ರಥಮ ಮಂಡಲದ ೧೧೬ ರಿಂದ ೧೨೧ ವರೆಗಿನ ಸೂಕ್ತಗಳ ಋಷಿ ಕಕ್ಷೀವಾನ್. ಋಷಿಯ ನಾಮ ತೆಗೆದುಕೊಳ್ಳುವಾಗ ’ಕಕ್ಷೀವಾನ್ ದೈರ್ಘತಮಃ ಔಶಿಜಃ’ ಎಂದು ಉಶಿಜಾಳಿಗೆ ಗೌರವವನ್ನು ಸಲ್ಲಿಸಲಾಗುತ್ತದೆ.
ಮಹಾಬಲ ಭಟ್, ಗೋವಾ
ಸಂಪರ್ಕ: ೯೮೬೦೦೬೦೩೭೩

No comments:
Post a Comment