ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
ಸನಾತನ ಭಾರತದ ಸ್ತ್ರೀರತ್ನಗಳು
ಭಾಗ - 1
ಮಾನವರ
ಮಾತೆ ಶತರೂಪಾ
ಮಾನವರ ಮೂಲ ಪುರುಷ ’ಮನು’.
ಹದಿನಾಲ್ಕು ಮನುಗಳಲ್ಲಿ ಮೊದಲ ಮನು ’ಸ್ವಾಯಂಭು ಮನು’ ಅವನ ಪತ್ನಿ ಶತರೂಪಾ. ಅಂದರೆ ಮಾನವರೆಲ್ಲರ
ತಾಯಿ ಇವಳು. ಬ್ರಹ್ಮಾಂಡ ಪುರಾಣದ ಪ್ರಕಾರ ಈ ಸೃಷ್ಟಿಯ ಮೊದಲ ಸ್ತ್ರೀ ಶತರೂಪಾ. ಬ್ರಹ್ಮನ
ಎಡಭಾಗದಿಂದ ಹುಟ್ಟಿದವಳೆಂದು ಉಲ್ಲೇಖವಿದೆ. ಬಲಭಾಗದಿಂದ ಹುಟ್ಟಿದ ಸ್ವಾಯಂಭುಮನುವನ್ನು ಪತಿಯಾಗಿ
ಸ್ವೀಕರಿಸಿ ಬ್ರಹ್ಮನ ಸೃಷ್ಟಿಕಾರ್ಯವನ್ನು ಮುಂದುವರಿಸಿದಳು. ಪ್ರಿಯವ್ರತ, ಉತ್ತಾನಪಾದ ಮುಂತಾದ
ಏಳುಜನ ಪುತ್ರರನ್ನೂ, ಆಕೂತಿ, ಪ್ರಸೂತಿ ಮತ್ತು ದೇವಹೂತಿ ಎಂಬ ಮೂವರು ಪುತ್ರಿಯರನ್ನೂ ಪಡೆದಳು.
ಇವಳು ವಿವಾಹಕ್ಕಿಂತ ಮುಂಚೆ
ಕಠಿಣ ತಪಸ್ಸನ್ನು ಆಚರಿಸಿದಳು. ಆ ತಪೋಬಲದ ಕಾರಣದಿಂದಲೇ ಈ ಸೃಷ್ಟಿಯ ಪ್ರಥಮ ಪುರುಷ ಸ್ವಾಯಂಭುವ
ಮನುವನ್ನು ಪತಿಯನ್ನಾಗಿ ಪಡೆದಳು. ಸ್ವಾಯಂಭುವ ಶಾಸ್ತ್ರದಲ್ಲಿ ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ
ಸಮಪಾಲು ಸಿಗಬೇಕು ಎಂದು ಹೇಳಿರುವುದು ಇಲ್ಲಿ ಉಲ್ಲೇಖನೀಯ.
ದೃಢತೆ ಹಾಗೂ ಭಕ್ತಿಗೆ ಹೆಸರಾದ
’ಧ್ರುವ’ ಶತರೂಪೆಯ ಮೊಮ್ಮಗ. ಧ್ರುವ ನಲ್ಲಿ ಆ ಸಂಸ್ಕಾರವನ್ನು ಬಿತ್ತಿದ್ದು ಇವಳೇ. ಪತಿಗೆ
ಅನುಕೂಲೆಯಾಗಿ, ಉತ್ತಮ ಸಂತಾನದ ಜನನಿಯಾಗಿ, ಶ್ರೇಷ್ಠ ತಪಸ್ವಿನಿಯಾಗಿ ಆದ್ಯ ಸ್ತ್ರೀ ಶತರೂಪಾ ಆದರ್ಶನಾರಿಯಾಗಿ
ನಮ್ಮ ಮುಂದೆ ನಿಲ್ಲುತ್ತಾಳೆ.
No comments:
Post a Comment