ಮಹಿಳಾ
ದಿನಾಚರಣೆಯ ವಿಶೇಷ ಸರಣಿ ಬರಹ..........
ಸನಾತನ
ಭಾರತದ ಸ್ತ್ರೀರತ್ನಗಳು
ಸ್ತ್ರೀಸಂವೇದನೆಯ ಹಾಗೂ ಮಹಿಳಾ
ಸಬಲೀಕರಣದ ವಿಷಯ ಚರ್ಚೆಗೆ ಬಂದಾಗ ಹೆಚ್ಚಾಗಿ ಟೀಕೆಗೆ ಒಳಗಾಗುವವರು ಸಂಪ್ರದಾಯವಾದಿಗಳು ಹಾಗೂ
ನಮ್ಮ ವೇದ – ಪುರಾಣ – ಸ್ಮೃತಿಗಳು. ಇವು ಸ್ತ್ರೀ ಶೋಷಣೆಗಾಗಿಯೇ ಹುಟ್ಟಿಕೊಂಡ ಕಥೆಗಳು ಹಾಗೂ
ನಿಯಮಗಳು ಎಂಬುದಾಗಿ ಸ್ತ್ರೀವಾದಿಗಳು ತುಂಬಾ ರೋಷದಿಂದ ವಾದಿಸುತ್ತಾರೆ. ಅದನ್ನು ಅಲ್ಲಗಳೆಯುವವರ
ಕೈಲಿ ಇರುವುದು ಮೈತ್ರೇಯಿ, ಗಾರ್ಗಿ ಮುಂತಾದ ಬೆರಳೆಣಿಕೆಯಷ್ಟು ಉದಾಹರಣೆಗಳು ಮಾತ್ರ. ಅಂತಹ
ಆದರ್ಶ ನಾರಿಯರ ಬಗ್ಗೆ ಹೇಳುವಾಗ ಅವರ ’ಪಾತಿವ್ರತ್ಯ ಧರ್ಮ’ದ ಗುಣಗಾನವಾಗುತ್ತದೆಯೇ ಹೊರತು ಅವರ
ವ್ಯಕ್ತಿತ್ವಕ್ಕೆ ನ್ಯಾಯ ಸಿಗುವುದಿಲ್ಲ. ಈ ಹದಿಬದೆಯ ಧರ್ಮೋಪದೇಶ ಮಹಿಳೆಯರಲ್ಲಿ ಆತ್ಮಗೌರವವನ್ನು
ಹೆಚ್ಚಿಸುವ ನಿಟ್ಟಿನಲ್ಲಿ ಅಷ್ಟೇನೂ ಪರಿಣಾಮಕಾರಿಯಾಗಲಾರದು.
ಈ ಸರಣಿಬರಹದ ಉದ್ದೇಶ ಪ್ರಾಚೀನ
ಕಾಲದಲ್ಲಿ ತಮ್ಮ ವ್ಯಕ್ತಿತ್ವದಿಂದ ಸಮಾಜದಲ್ಲಿ ಉತ್ತಮ ಸ್ಥಾನಮಾನಗಳಿಸಿದ್ದ ಕೆಲವು ಸ್ತ್ರೀರತ್ನಗಳನ್ನು
ಪರಿಚಯಿಸುವುದು. ಅವರಲ್ಲಿ ಅನೇಕರು ಪತಿವ್ರತೆಯರೇ ಆಗಿದ್ದರೂ ಇಲ್ಲಿ ಅವರ ಪಾತಿವ್ರತ್ಯ
ವ್ಯಕ್ತಿತ್ವದ ಒಂದು ಗುಣವಾಗಿಯಷ್ಟೇ ಉಲ್ಲೇಖವಾಗಲಿದೆ. ಈ ಎಲ್ಲ ಮಹಿಳೆಯರು ಐತಿಹಾಸಿಕ
ವ್ಯಕ್ತಿಗಳೇ ಎಂಬ ಪ್ರಶ್ನೆಗೆ ಉತ್ತರ ನೀಡುವುದು ಕಠಿಣ. ನಮ್ಮ ಪ್ರಾಚೀನ ಗ್ರಂಥಗಳಲ್ಲಿ
ಉಲ್ಲಿಖಿತವಾಗಿರುವ ಘಟನೆಗಳು ನೈಜವೇ ಕಾಲ್ಪನಿಕವೇ ಎಂಬ ವಿಚಾರ ನಮ್ಮ ನಂಬುಗೆಯನ್ನು
ಅವಲಂಬಿಸಿರುತ್ತದೆ. ಹಾಗಾಗಿ ಅನೇಕರಿಗೆ ಈ ಬರಹ ಕಥೆಯೆಂದೆನಿಸಬಹುದು. ಅಂಥವರೆಲ್ಲ
ನೀತಿಕಥೆಗಳನ್ನು ಓದುವಂತೆ ಈ ಲೇಖನ ಸರಣಿಯನ್ನು ಓದಬಹುದು. ಇಲ್ಲಿ ನೀಡಲಿರುವ ಮಾಹಿತಿಗಳನ್ನು
ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ. ಲೇಖನರೂಪಕ್ಕೆ ಇಳಿಸುವ ಚಿಕ್ಕ ಪ್ರಯತ್ನ ಮಾತ್ರ ನನ್ನದು.
ನಿಮಗೆ ಇಷ್ಟವಾದರೆ
ಬೆನ್ನುತಟ್ಟಿ. ಹೆಚ್ಚು ಹೆಚ್ಚು ಬಳಗಗಳಲ್ಲಿ ಹಂಚಿಕೊಳ್ಳಿ. ನಿಮ್ಮಲ್ಲಿ ಪೂರಕ ಮಾಹಿತಿಗಳಿದ್ದರೆ
ಒದಗಿಸಿ.
ಇತಿ ನಿಮ್ಮ ವಿನಮ್ರ
ಮಹಾಬಲ ಭಟ್
No comments:
Post a Comment