ಮಹಿಳಾ
ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
“ಸನಾತನ ಭಾರತದ
ಸ್ತ್ರೀರತ್ನಗಳು”
ಭಾಗ – ೧೩
ವೀರಾಂಗನಾ ವಿಶ್ಪಲಾ:
ವೈದಿಕ ಕಾಲದ ಸ್ತ್ರೀಯರಲ್ಲಿ ಋಷಿಪತ್ನಿಯರು ಹಾಗೂ ಋಷಿಕನ್ಯಕೆಯರೇ
ಹೆಚ್ಚು ಪ್ರಸಿದ್ಧರು. ಆದರೆ ಇಲ್ಲೊಬ್ಬಳು ಯುದ್ಧವಿಶಾರದೆಯಾದ ನಾರಿಯಿದ್ದಾಳೆ. ಅವಳೇ ವಿಶ್ಪಲಾ.
ಋಗ್ವೇದದ ಪ್ರಥಮ ಮಂಡಲದ ೧೧೨,೧೧೬,೧೧೭,೧೧೮ ಹಾಗೂ ಹತ್ತನೆಯ ಮಂಡಲದ ೩೯ನೆಯ ಸೂಕ್ತಗಳಲ್ಲಿ ಇವಳ
ಉಲ್ಲೇಖವಿದೆ. ಇವಳು ಖೇಲ ರಾಜನ ಮಹಾರಾಣಿಯಾಗಿದ್ದಳು. ವೇದಶಾಸ್ತ್ರಗಳಲ್ಲೂ, ಶಸ್ತ್ರಾಸ್ತ್ರ
ವಿದ್ಯೆಯಲ್ಲೂ ಅವಳು ಪಾರಂಗತಳಾಗಿದ್ದಳು. ಒಮ್ಮೆ ಮಹಾರಾಜನು ಶತ್ರುಗಳೊಡನೆ ಯುದ್ಧ ಮಾಡಬೇಕಾಗಿ
ಬಂದಾಗ ತಾನೂ ಕೂಡ ರಣಾಂಗಣಕ್ಕೆ ಹೋದಳು. ಶೂರತನದಿಂದ ಕಾದಾಡಿ ಶತ್ರುಗಳ ರುಂಡವನ್ನು
ಚೆಂಡಾಡುತ್ತಿರುವಾಗ ಅವಳ ಕಾಲನ್ನು ಯಾರೋ ಕತ್ತರಿಸಿಬಿಟ್ಟರು. ವಿಶ್ಪಲೆಯು ದೇವ ವೈದ್ಯರಾದ
ಅಶ್ವಿನೀದೇವತೆಗಳನ್ನು ಸ್ತುತಿಸಿದಾಗ ಅವರು ಪ್ರತ್ಯಕ್ಷರಾಗಿ ಕಬ್ಬಿಣದ ಕೃತಕ ಕಾಲನ್ನು
ಜೋಡಿಸಿದರು (ಕೃತಕ ಕಾಲಿನ ಜೋಡಣೆಯ ಉಲ್ಲೇಖ ಋಗ್ವೇದದಲ್ಲಿಯೇ ಇರುವುದನ್ನು ಗಮನಿಸಿ. ಋಗ್ವೇದ ೧ –
೧೧೬ – ೧೫) ನಂತರ ಮತ್ತೆ ಅವಳು ರಣಾಂಗಣದಲ್ಲಿ ಹೋರಾಡಿ ಜಯವನ್ನು ತಂದುಕೊಟ್ಟಳು. ಸನಾತನ ಭಾರತದ
ಪ್ರಥಮ ಯುದ್ಧಾಂಗನೆ ಈ ವಿಶ್ಪಲಾ.
ಮಹಾಬಲ
ಭಟ್, ಗೋವಾ
No comments:
Post a Comment