ಮಿತ್ರರೇ,
ಇದು ಮನಕ್ಕೆ ತೋಚಿದ್ದನ್ನೆಲ್ಲ ತೋಚಿದಂತೆ ಬರೆವ ಗೋಡೆಯಲ್ಲ. ಮನದ ಭಿತ್ತಿಯಲ್ಲಿ ಮೂಡಿದ
ವಿಚಾರವನ್ನು ಸಾಣೆಕಲ್ಲುಗಳಲ್ಲಿ ಪರೀಕ್ಷಿಸಿ ಶುದ್ಧವೆನಿಸಿದ್ದನ್ನು ಮಾತ್ರ ನೀಡುತ್ತೇನೆ. ಇದು
ನನ್ನ ಶೈಲಿ. ನಿಮಗೆ ಇಷ್ಟವಾಗಲೇಬೇಕು ಎಂಬ ಹಠವಿಲ್ಲ. ಹೌದೆನಿಸಿದರೆ ಹೌದೆನ್ನಿ, ಇಲ್ಲವಾದರೆ
ಇಲ್ಲವೆನ್ನಿ. ಆದರೆ ದಯವಿಟ್ಟು ಏನನ್ನಾದರೂ ಅನ್ನಿ.
ನಾನೇನು ಪಂಡಿತನಲ್ಲ. ಅಲ್ಪ ಸ್ವಲ್ಪ ಓದಿಕೊಂಡಿದ್ದೇನೆ. ’ಭಗವದ್ಗೀತಾ ಕಿಂಚಿದಧೀತಾ,
ಗಂಗಾಜಲಲವಕಣಿಕಾ ಪೀತಾ’ ಎನ್ನುವಂತೆ ಸಿಕ್ಕ ಜ್ಞಾನಕಣವನ್ನು ನನ್ನ ವಿಚಾರಕ್ಕೊಳಪಡಿಸುವ ಪ್ರಯತ್ನ
ಇದು. ಹಳೆಯದರ ಮೇಲೆ ನನಗೆ ಹುಚ್ಚು ಅಭಿಮಾನ. ಅದನ್ನು ಹೊಸತಕ್ಕೆ ಹೊಂದಿಸುವ ವಿಚಿತ್ರ ಪ್ರಯತ್ನ.
ಕೆಲವರಿಗೆ ಇದು ಬಿಸಿಮಾಡಿದ ತಂಗಳು ಎನಿಸಬಹುದು. ಆದರೆ ’ಹಳೆ ಬೇರು ಹೊಸ ಚಿಗುರು ಕೂಡಿರಲು ಮರ
ಸೊಬಗು’ ಎಂಬ ಕಗ್ಗದ ಸಾಲಿನಲ್ಲಿ ಅಪರಿಮಿತ ವಿಶ್ವಾಸ ನನಗೆ. ಹಳೆಯದಲ್ಲ ಹಳಸಲ್ಲ ಎಂಬ ನಂಬಿಕೆ
ನನ್ನದು. ಹಳೆಯದು ಗೊತ್ತೇ ಇರದವರಿಗೆ ಅದೂ ಹೊಸತಾಗಿ ತೋರೀತು.
ನಿಮ್ಮ ಪ್ರತಿಕ್ರಿಯೆ ಬರೆಯುವ ಉತ್ಸಾಹ ತಂದೀಯುತ್ತದೆ. ಅದು ಋಣಾತ್ಮಕವಾಗಿದ್ದರೂ
ಪರವಾಗಿಲ್ಲ. ದಯವಿಟ್ಟು ಪ್ರತಿಕ್ರಿಯಿಸಿ.
ಇತಿ ತಮ್ಮವ
ಮಹಾಬಲ ಭಟ್
2 comments:
ಹಳೆಯದನ್ನು ಕಾಪಿಡುವ ಹೊಸತನದ ಈ ಪ್ರಯತ್ನಕ್ಕೆ ಹೊಸ ಹುರುಪಿಗೆ ಶುಭವಾಗಲಿ. ಹೊಸತಲೆಮಾರಿಗೆ ಅತ್ಯುತ್ತಮವಾದ ಕೊಡುಗೆಯನ್ನು ಕೊಡುವ ಬರಹಗಳ ಈ ಸಂಕಲ್ಪಕ್ಕೆ
"ನಾಂದಿ" ಶುಭಾರಂಭವಾಗಲಿ.ನಿಮ್ಮ ಬರಹಗಳ ನಿರೀಕ್ಷೆಯಲ್ಲಿ..
ಹೊಸ ಪ್ರಯತ್ನಕ್ಕೆ ಶುಭವಾಗಲಿ, ಅಕ್ಷರ ಜ್ಞಾನ ಬೆಳಗಲಿ ಬೆಳೆಸಲಿ...
Post a Comment